ಚಿನ್ನಸ್ವಾಮಿ ಫಿಲಂಸ್ ಬ್ಯಾನರ್ ಅಡಿ ಯತಿರಾಜ್ ತಮ್ಮ ಸ್ನೇಹಿತರ ಜೊತೆ ಸೇರಿ ನಿರ್ಮಿಸಿ, ಹರಿವರಾಸನಂ ಅವರು ನಿರ್ದೇಶಿಸಿದ ಚಿತ್ರವೇ “ಮಗ್ಗಿಪುಸ್ತಕ”. ಈ ಚಿತ್ರವು ಈಗಾಗಲೇ ಹಲವು ಚಿತ್ರಮಂದಿರದಲ್ಲಿ 25 ದಿನಗಳನ್ನು ಪೂರೈಸಿದೆ.

ಜೀವನವೇ ಒಂದು ಮಗ್ಗಿಪುಸ್ತಕ ಇದ್ದಂತೆ. ಇದರಲ್ಲಿ ಒಳ್ಳೆಯದನ್ನು ಕೂಡಬೇಕು, ಕೆಟ್ಟದ್ದನ್ನು ಕಳೆಯಬೇಕು. ಜ್ಞಾನವನ್ನು ಗುಣಿಸಬೇಕು, ಅಜ್ಞಾನವನ್ನು ಭಾಗಿಸಬೇಕು. “ಅವನಿ” ಎಂಬ ಕಾದಂಬರಿಯನ್ನು ಆಧರಿಸಿ ಈ ಚಿತ್ರವನ್ನು ನಿರ್ಮಿಸಲಾಗಿದೆ.

ಈ ಚಿತ್ರವು ಕೋವಿಡ್ ಕಾಲದ ಬಡ ಕುಟುಂಬಗಳ ಕಷ್ಟಗಳು ಮತ್ತು ಆನ್ಲೈನ್ ಶಿಕ್ಷಣದ ಪರಿಣಾಮಗಳನ್ನು ಕೇಂದ್ರೀಕರಿಸಿದ ನೈಜ ಘಟನೆ ಆಧಾರಿತ ಕಥೆಯನ್ನು ಒಳಗೊಂಡಿದೆ. ಜೀವನದ ಲೆಕ್ಕಾಚಾರಗಳನ್ನು ಒಳಗೊಂಡAತೆ ನಾಲ್ಕು ಆಯಾಮಗಳಲ್ಲಿ ಈ ಚಿತ್ರ ಸಾಗುತ್ತದೆ.
ಈ ಚಿತ್ರದಲ್ಲಿ ರಂಜನ್, ರಣ್ವಿ ಶೇಖರ್, ರಕ್ಷಾ ಗೌಡ ಮತ್ತು ಗಿರಿಜಾ ಲೋಕೇಶ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

7 ಹಾಡುಗಳನ್ನು ಒಳಗೊಂಡಿರುವ ಈ ಚಿತ್ರಕ್ಕೆ ಎಸ್.ಎಸ್.ನಾಚಪ್ಪ ಅವರ ಸಂಗೀತ ಸಂಯೋಜನೆ ಇದೆ. ನಂದಕುಮಾರ್ ಛಾಯಾಗ್ರಹಣ. ಶಿವಕುಮಾರ್ ಅವರ ಸಂಕಲನ ಚಿತ್ರಕ್ಕೆ ಮತ್ತಷ್ಟು ಮೆರುಗು ನೀಡಿದೆ.