
Love Mocktail 3 ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಸಿನಿಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ. ಈ ಸಿನಿಮಾ ಹಿಂದಿನ ಭಾಗಗಳಾದ Love Mocktail ಮತ್ತು Love Mocktail 2 ಗಳ ಕಥೆಯನ್ನು ಮುಂದುವರಿಸುವ ಭಾಗವಾಗಿದ್ದು, ಆದಿಯ ಜೀವನದಲ್ಲಿ ಪ್ರೀತಿಯ ಹೊಸ ಅಧ್ಯಾಯವನ್ನು ತೋರಿಸುವ ಕಥೆಯಾಗಿರಲಿದೆ.
“ಲವ್ ಮಾಕ್ಟೇಲ್” ಚಿತ್ರದ ನಾಯಕ ಆದಿ ತನ್ನ ಜೀವನದಲ್ಲಿ ನಡೆದ ಪ್ರೇಮಕಥೆಗಳನ್ನು ನೆನಪಿಸಿಕೊಳ್ಳುತ್ತಾ ಕಥೆ ಆರಂಭವಾಗುತ್ತದೆ. ಅವನ ಜೀವನದಲ್ಲಿ ಬರುವ ನಿಧಿ, ಅವರಿಬ್ಬರ ನಡುವೆ ಬೆಳೆದು ಬರುವ ಪ್ರೀತಿ ಮತ್ತು ಅವರ ಜೀವನದಲ್ಲಿ ನಡೆಯುವ ವಿಧಿಯಾಟ ಕಥೆಯ ಪ್ರಮುಖ ಅಂಶಗಳಾಗಿವೆ. ಆದರೆ ವಿಧಿಯ ಕ್ರೂರ ಆಟದಿಂದ ನಿಧಿಯನ್ನು ಕಳೆದುಕೊಂಡ ಆದಿ, ಆ ದುಃಖದಿಂದ ಹೊರಬರಲು ಬಹಳ ಪ್ರಯತ್ನಪಡುತ್ತಾನೆ.
ನಿಧಿಯ ನೆನಪುಗಳು ಆದಿಯ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುತ್ತವೆ. ಅವಳು ಇಲ್ಲದ ಆದಿಯ ಜೀವನ ಖಾಲಿಯಾಗಿ ಭಾಸವಾಗುತ್ತದೆ. ಈ ಸಂದರ್ಭದಲ್ಲಿ ಆದಿಯ ಜೀವನಕ್ಕೆ ಸಿಹಿ ಎಂಬ ಹುಡುಗಿ ಬರುತ್ತಾಳೆ. ಸಿಹಿಯ ಸ್ನೇಹ ಮತ್ತು ಬೆಂಬಲದಿಂದ ಆದಿ ಮತ್ತೆ ಜೀವನದತ್ತ ಹೆಜ್ಜೆ ಇಡಲು ಆರಂಭಿಸುತ್ತಾನೆ.

ಆದರೆ ನಿಧಿಯ ಮೇಲಿನ ಪ್ರೀತಿ ಮತ್ತು ಅವಳ ನೆನಪುಗಳು ಆದಿಯನ್ನು ಬಿಡುವುದಿಲ್ಲ. ಒಂದು ಕಡೆ ಹಳೆಯ ನೆನಪುಗಳು, ಮತ್ತೊಂದು ಕಡೆ ಹೊಸ ಸಂಬಂಧದ ಆರಂಭ – ಈ ಎರಡು ಭಾವನೆಗಳ ನಡುವೆ ಆದಿಯ ಮನಸ್ಸಿನಲ್ಲಿ ನಡೆಯುವ ಸಂಘರ್ಷವೇ “ಲವ್ ಮಾಕ್ಟೇಲ್ 2” ಚಿತ್ರದ ಕಥೆಯಾಗಿ ಮೂಡಿಬಂದಿತ್ತು.
ಈಗ “ಲವ್ ಮಾಕ್ಟೇಲ್ 3” ಚಿತ್ರದಲ್ಲಿ ಆದಿ ತನ್ನ ಜೀವನವನ್ನು ಹೊಸ ದೃಷ್ಟಿಯಿಂದ ನೋಡುವ ಪ್ರಯಾಣವನ್ನು ಮುಂದುವರಿಸುತ್ತಾನೆ. ಅವನ ಹಳೆಯ ನೆನಪುಗಳು, ಹೊಸ ಸಂಬಂಧಗಳು ಮತ್ತು ಜೀವನದ ಅರ್ಥವನ್ನು ಹುಡುಕುವ ಪ್ರಯಾಣವೇ ಈ ಚಿತ್ರದ ಕಥಾಹಂದರವಾಗಿರಲಿದೆ. ಪ್ರೀತಿ ಎಂದರೆ ಕೇವಲ ಇಬ್ಬರ ನಡುವಿನ ಸಂಬಂಧವಲ್ಲ; ಅದು ಜೀವನದ ಪಾಠಗಳನ್ನು ಕಲಿಸುವ ಅನುಭವ ಎಂಬ ಸಂದೇಶವನ್ನು ಈ ಸಿನಿಮಾ ಮುಂದುವರಿಸಲಿದೆ.
ಈ ಚಿತ್ರದ ಹಾಡುಗಳು ಈಗಾಗಲೇ ಎಲ್ಲರ ಮನಸ್ಸನ್ನು ಗೆದ್ದಿದ್ದು, ಇದೇ ತಿಂಗಳ ಮಾರ್ಚ್ 19 ರಂದು ಚಿತ್ರ ಬಿಡುಗಡೆಯಾಗಲಿದೆ.
